ಫಾಲುನ್ ದಾಫಾದ ಸಂಕ್ಷಿಪ್ತ ಪರಿಚಯ
ಫಾಲುನ್ ದಾಫಾವನ್ನು, ಫಾಲುನ್ ಗೊಂಗ್ ಎಂದೂ ಕರೆಯಲಾಗುವುದು. ಇದು ಒಂದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ವಿಶ್ವಾದ್ಯಂತ ಕೋಟ್ಯಾಂತರ ಜನರು ಇದನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ. ಬುದ್ಧ ಶಾಲೆಯ ಸಂಪ್ರದಾಯದಲ್ಲಿ ಬೇರೂರಿರುವ ಇದು ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ: ಬೋಧನೆಗಳ ಅಧ್ಯಯನದ ಮೂಲಕ ಸ್ವಯಂ-ಸುಧಾರಣೆ ಮತ್ತು ಸೌಮ್ಯ ವ್ಯಾಯಾಮ ಹಾಗೂ ಧ್ಯಾನ.
ಫಾಲುನ್ ದಾಫಾ ಪದ್ಧತಿಯ ಮೇಲಿನ ಶ್ರದ್ದೆಯು ಶಿಸ್ತುಬದ್ಧ ಅಭ್ಯಾಸದ ಮೂಲಕ ಆಧ್ಯಾತ್ಮಿಕ ಬೆಳವಣಿಗೆಯ ಸಾಧ್ಯತೆಗೆ ಎಡೆಮಾಡಿ ಕೊಡುವುದು. ಇದರ ಬೋಧನೆಗಳು, ಅಭ್ಯಾಸಿಗರು ತಮ್ಮ ಜೀವನವನ್ನು ಬ್ರಹ್ಮಾಂಡದ ಮೂಲ ಗುಣಗಳಾದ ಸತ್ಯ, ಸಹಾನುಭೂತಿ ಮತ್ತು ಸಹನಶೀಲತೆಗಳಿಗೆ ಸಮೀಕರಿಸಲು ಪ್ರಯತ್ನಿಸುವಾಗ ಅನುಚಿತ ವ್ಯಾಮೋಹಗಳನ್ನು ತ್ಯಜಿಸಲು ಪ್ರೋತ್ಸಾಹಿಸುವುವು.
ಸಾಮಾನ್ಯವಾಗಿ ಫಾಲುನ್ ದಾಫಾ ಅಭ್ಯಾಸ ಮಾಡುವವರು ಇದು ತಮ್ಮ ಜೀವನವನ್ನು ಪರಿವರ್ತಿಸುವುದೆನ್ನುವುದನ್ನು ಕಂಡುಕೊಂಡಿದ್ದಾರೆ. ಅನೇಕರು ತಮ್ಮ ಆರೋಗ್ಯದಲ್ಲಿ ಅಚ್ಛರಿಯ ಬೆಳವಣಿಗೆಯನ್ನು ನವಚೈತನ್ಯವನ್ನು, ಮಾನಸಿಕ ಸ್ಪಷ್ಟತೆಯನ್ನು ಮತ್ತು ಒತ್ತಡಗಳಿಂದ ಮುಕ್ತಿಯನ್ನು ಕಂಡುಕೊಂಡಿದ್ದಾರೆ. ಅತಿ ಮುಖ್ಯವಾಗಿ, ಫಾಲುನ್ ದಾಫಾದಲ್ಲಿ ಅತ್ಯಂತ ಅಗಾಧವಾದ ಒಂದು ಪುರಸ್ಕೃತ ಆಧ್ಯಾತ್ಮಿಕ ಹಾದಿ ದೊರಕಿರುವುದಾಗಿ ಅನೇಕರಿಗೆ ಅನಿಸಿದೆ. ಹೆಚ್ಚಿನ ತಿಳುವಳಿಕೆಗಾಗಿ